ನಿಮ್ಮ ಮನೆ ಮಾರಾಟ ಮಾಡುವ ಮುನ್ನ ಮಾಡಬೇಕಾದ ಕೆಲವು ಮುಖ್ಯ ಅ೦ಶಗಳು

ನಿಮ್ಮ ಮನೆ ಮಾರಾಟ ಮಾಡುವ ಮುನ್ನ ಮಾಡಬೇಕಾದ ಕೆಲವು ಮುಖ್ಯ ಅ೦ಶಗಳು
ನಿಮ್ಮ ಮನೆ ಮಾರಾಟ ಮಾಡುವ ಮುನ್ನ ಮಾಡಬೇಕಾದ ಕೆಲವು ಮುಖ್ಯ ಅ೦ಶಗಳು

 

ನಿಮ್ಮ ಮನೆ ಮಾರಾಟ ಮಾಡುವ ಮುನ್ನ ಮಾಡಬೇಕಾದ ಕೆಲವು ಮುಖ್ಯ ಅ೦ಶಗಳು
+

ಗೋಡೆಯನ್ನು ಸಿಂಗರಿಸಿ:

ಮನೆಯಲ್ಲಿ ಖರೀದಿದಾರರು ಮೊದಲು ಗಮನಿಸುವುದು ಗೋಡೆ ಮತ್ತು ಪೇಂಟ್ ಹೇಗಿದೆ ಎಂದು. ಅಲ್ಲಲ್ಲಿ ಬಣ್ಣ ಮಾಸಿದ್ದರೆ, ಸಿಮೇಂಟ್ ಕಿತ್ತು ಬಂದಿದ್ದರೆ ಅಥವಾ ಬಣ್ಣಮಾಸಿದ್ದರೆ ಅದು ಜನರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಗೋಡೆಗೆ ಸರಳವಾದ ಮತ್ತು ಸೂಕ್ತವಾದ ಬಣ್ಣ ಬಳಿಯುವುದು ಉತ್ತಮ. ಆದರೆ, ಬಣ್ಣಗಳ ಆಯ್ಕೆಯಲ್ಲೂ ಸ್ವಲ್ಪ ಎಚ್ಚರ ವಹಿಸಬೇಕು. ಗೋಡೆಗೆ ಹೊಂದಿಕೆಯಾಗುವ, ಸರಳ, ಶುಭ್ರವೆನಿಸುವ ಬಣ್ಣ ಹಚ್ಚಿರಿ. ಒಳಾಂಗಣ ವಿನ್ಯಾಸದಲ್ಲಿ ನಿಮಗೆ ಆಸಕ್ತಿಯಿದ್ದರೆ ಮತ್ತಷ್ಟು ಆಕರ್ಷಕವಾಗಿ ಬಣ್ಣಗಳ ಸಂಯೋಜನೆ ಮಾಡಬಹುದು.  ಹೀಗಾಗಿ ಖರೀದಿದಾರರ ಅಭಿರುಚಿ ಗಮನಿಸಿಕೊಂಡು ವಿನ್ಯಾಸ ಮಾಡಿದರೆ ಉತ್ತಮ.

ಸೂಕ್ತ ಬಣ್ಣ ಇರಲಿ:

ಗೋಡೆಯಲ್ಲಿ ಸಣ್ಣ ಬಿರುಕು, ಸಿಮೇಂಟ್ ಕಿತ್ತುಹೋಗಿದ್ದರೆ, ಕಲೆಯಾಗಿದ್ದರೆ ಸರಿಪಡಿಸಿಡಿ.

ಕರ್ಟನ್ ಬದಲಿಸಿ:

ಕೆಲವು ಕಡೆ ಮನೆಗೆ ಒಪ್ಪವಾಗಿ, ಓರಣವಾಗಿ ಬಣ್ಣ ಬಳಿದಿದ್ದರೂ ಕಿಟಕಿಯ ಜಾಲರಿ ಪರದೆಯನ್ನು ಬದಲಿಸಿರುವುದಿಲ್ಲ. ಗೋಡೆ ಸುಂದರವಾಗಿದ್ದು, ಹಳೆಯ ಕರ್ಟನ್ ಇದ್ದರೆ ಅದು ಅಂದಗಡಿಸುತ್ತದೆ. ಅದರ ಬದಲು ಚಿತ್ತಾರದ, ಸರಳ ಪ್ಯಾಟರ್ನ್ ಹೊಂದಿರುವ ಆಕರ್ಷಕ ಪರದೆ ಬಳಸಿ. ಅದು ಗ್ರಾ್ಯಂಡ್ ಲುಕ್ ಕೊಡುತ್ತದೆ. ಖರೀದಿದಾರರನ್ನು ಬೇಗನೆ ಸೆಳೆಯುತ್ತದೆ.

ಹೂವಿನ ಪಾಟ್ ಇರಿಸಿ :

ಪರಿಸರಪ್ರೇಮಿ ನೀವಾಗಿದ್ದರೆ, ನಿಮ್ಮ ಮನೆ, ತಾರಸಿ, ಹೊರಾಂಗಣ ಮತ್ತು ಬಾಲ್ಕನಿಯಲ್ಲಿ ಹೂವಿನ ಕುಂಡ, ನೇತಾಡುವ ಹೂಕುಂಡಕ್ಕೆ ಜಾಗ ಕಲ್ಪಿಸಬಹುದು. ಅವು ಮನೆಯ ಅಂದ ಹೆಚ್ಚಿಸುತ್ತವೆ. ಜತೆಗೆ ನೈಸರ್ಗಿಕ ಅನುಭವವೂ ಇರುವುದರಿಂದ, ಜನರು ಅವುಗಳನ್ನು ಇಷ್ಟಪಡುತ್ತಾರೆ. ಆದರೆ ಸರಳ ಮತ್ತು ನಿರ್ವಹಣೆ ಸುಲಭವಾದ ಗಿಡಗಳನ್ನಷ್ಟೇ ಬಳಸುವುದು ಉತ್ತಮ. ಖರೀದಿಗೆ ಬರುವವರು ಮನೆ ಒಳಗೆ ಮತ್ತು ಹೊರಗಿನ ವಾತಾವರಣ, ಅನುಕೂಲತೆ, ಸ್ವಚ್ಛತೆ ಮತ್ತು ನೀರು, ಗಾಳಿ-ಬೆಳಕಿನ ಲಭ್ಯತೆಗೆ ಹೆಚ್ಚು ಗಮನ ನೀಡುವುದರಿಂದ ಅವುಗಳ ಲಭ್ಯತೆಗೆ ಹೆಚ್ಚು ಗಮನ ಹರಿಸುವುದು ಸೂಕ್ತ. ಇಲ್ಲವಾದರೆ ಮನೆಯೊಳಗೆ ಸಾಕಷ್ಟು ದುಬಾರಿ ಫರ್ನಿಚರ್ ಇದ್ದರೂ, ಗಾಳಿ-ಬೆಳಕು ಸರಿಯಾಗಿಲ್ಲದಿದ್ದರೆ ಖರೀದಿದಾರರಿಗೆ ಉಸಿರು ಕಟ್ಟಿದ ಅನುಭವವಾಗಬಹುದು..

ನಿಮ್ಮ ಮನೆಯ ದಾಖಲೆಗಳು :

ಖರೀದಿದಾರರು ಮನೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಬಹುದು, ಆದ್ದರಿಂದ ಕಾಗದಪತ್ರಗಳನ್ನು ತೆಗೆದಿಡಿ. ಯುಟಿಲಿಟಿ ಬಿಲ್ಗಳು, ತೆರಿಗೆ ಬಿಲ್ಗಳು, ನವೀಕರಣ ವಿವರಗಳು, ಖಾತ ಮತ್ತಿನಿತರ ಪತ್ರಗಳನ್ನು ಮರೆಯದೆ ಸರಿಯಾಗಿ ಇಟ್ಟಿರಿ.

ಉಟದ ಟೇಬಲ್ :

ಯಾರಾದರೂ ತಿನ್ನಲು ಬಯಸಿದರೆ ನಿಮ್ಮ ಊಟದ ಕೋಣೆಯನ್ನು ಸ್ವಚ್ಚವಾಗಿ ಇಡಿ. ಮಕ್ಕಳ ಹೋಮ್ವರ್ಕ್ ವಸ್ತು ಊ ಟದ ಕೋಣೆಯ ಮೇಜಿನ ಮೇಲೆ ಇದ್ದರೆ ತೆಗೆದಿಡಿ.  ಹಳೆಯ ಟೇಬಲ್ ಅನ್ನು ಮರೆಮಾಡಲು ಹೊಸ ಟೇಬಲ್ ಬಟ್ಟೆಯನ್ನು ಹಾಕಿಡಿ.

ಮನೆಯ ಬೆಳಕು :

ಬೆಳಕಿನ ಬುಲ್ಬುಗಳನ್ನು ಬದಲಿಸಿ. ವರ್ಷಗಳಿಂದ ಸುಟ್ಟುಹೋದ ಎಲ್ಲಾ ಬುಲ್ಬುಗಳ ಬಗ್ಗೆ ಮರೆಯುವುದು ಸುಲಭ, ಆದರೆ ನಿಮ್ಮ ಮನೆ ಸಾಧ್ಯವಾದಷ್ಟು ಪ್ರಕಾಶಮಾನವಾಗಿರಬೇಕು ಎಂದು ನೀವು ಬಯಸುತ್ತೀರಿ. ಖರೀದಿದಾರರಿಗೆ ಮನೆಯ ಬೆಳಕು ನಂಬಲಾಗದ ವ್ಯತ್ಯಾಸವನ್ನು ಮಾಡುತ್ತದೆ.

ಮನೆಯ ಪ್ರವೇಶದ್ವಾರ :

ಬಹುತೇಕ ಖರೀದಿದಾರರು ನಿಮ್ಮ ಮನೆಯೊಳಗೆ  ಪ್ರವೇಶಿಸುವಾಗ 20 ಸೆಕೆಂಡುಗಳ ಭಾವನಾತ್ಮಕ ಪ್ರತಿಕ್ರಿಯೆಯನ್ನು ಹೊಂದಿರುತ್ತಾರೆ ಎಂಬುದನ್ನು ನೆನಪಿಡಿ. ಬುಟುಗಳು, ಉಪಯೋಗಿಸದ ವಸ್ತುಗಳನ್ನು ಖರೀದಿದಾರರ ಕಣ್ಣೇದುರು ಇಡಬೇಡಿ. ಪ್ರವೇಶದ್ವಾರವನ್ನು ಸ್ವಚ್ಛವಾಗಿಡಿ.

ಮನೆಯೊಳಗಿನ ವಾಸನೆ :

ನಿಮ್ಮ ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ, ಉತ್ತಮ ಸುಗ೦ದ ಭರಿತ ದ್ರವ್ಯವನ್ನು ಸಿ೦ಪಡಿಸಿಡಿ.

ಮನೆಯ ಮೆಲ್ಚಾವಣೆ :

ಮನೆಯ ಮೇಲೆ ಬೆಡವಾದ ಅಥವಾ ಗಲೀಜಾದ ವಸ್ತುಗಳಿದ್ದರೆ ಮೊದಲು ಸರಿಯಾಗಿ ಇಡಿ. ನೆಲವನ್ನು ಸ್ವಚ್ಚವಾಗಿ ಇರುವ೦ತೆ ನೊಡಿಕ್ಕೊಳ್ಳಿ.

ಮನೆಯ ಕಿಟಕಿಗಳು ಮತ್ತು ಬಾಗಿಲುಗಳು :

ಕಿಟಕಿ ಮತ್ತು ಬಾಗಿಲುಗಳುಲ್ಲಿ ದುಳೂ ಅಥವಾ ಕಸ ಇದ್ದರೆ ಒರೆಸಿಡಿ. ಕಿಟಕಿಯ ಕ೦ಬಿಗಳಲ್ಲಿ ಜೇಡರ ಬಲೆ ಇದ್ದರೆ ತೆಗೆದು ಒರೆಸಿಡಿ. ಪರದೆಗಳನ್ನು ಸಾದ್ಯವದರೆ ತೊಳೆದು ಹಾಕಿಡಿ.

Contact Us


Subscribe

NoBroker.com

NoBroker.com is a disruptive real-estate platform that makes it possible to buy/sell/rent a house without paying any brokerage. Following are service along with Rent / Sell / Buy of Properties - Rental Agreement - Packers And Movers - Click And Earn - Life Score - Rent Receipts - NoBroker for NRIs

One thought on “ನಿಮ್ಮ ಮನೆ ಮಾರಾಟ ಮಾಡುವ ಮುನ್ನ ಮಾಡಬೇಕಾದ ಕೆಲವು ಮುಖ್ಯ ಅ೦ಶಗಳು”

Leave a Reply

Your email address will not be published. Required fields are marked *

People Also Ask